Parpalegiri

JOIN US AND BECOME PART OF
SOMETHING GREAT

Donation

CONTRIBUTE TO OUR LEGACY

Your generous contributions help preserve the rich traditions and spiritual heritage of Kalkuda Parpalegiri Temple.

॥ ಶ್ರೀ ಗೌರಿಶಂಕರ ಪ್ರಸೀದತು ॥

ಶ್ರೀ ಕ್ಷೇತ್ರ ಪರ್ಪಲೆಗಿರಿ ಅತ್ತೂರು, ಕಾರ್ಕಳ ಶ್ರೀ ಕ್ಷೇತ್ರ ಪರಿಚಯ

ಶ್ರದ್ಧೆಯ ಭಗವದ್ಭಕ್ತರೇ,

ನಮ್ಮ ನಾಡಿನ ಭವ್ಯ ಚರಿತ್ರೆಯಲ್ಲಿ ಕಾರ್ಕಳಕ್ಕೆ ತನ್ನದೇ ಆದ ವಿಶಿಷ್ಟ ಇತಿಹಾಸವಿದೆ. ಪ್ರಾಗೈತಿಹಾಸಿಕ ಕಾಲದಿಂದಲೂ ಮಾನವ ಬದುಕಿಗೆ ಪೂರಕವಾಗಿ ತೌಳವ ಪರಂಪರೆಯ ಮೇರು ಕಳಸದಂತೆ ಮೆರೆದ ನಗರಿ ಕಾರ್ಕಳ. ಕದಂಬರು, ಅಳುವರು. ಏಳುನಾಡು ಹೆಗ್ಗಡೆಗಳು ಈ ನಗರಿಯ ಮೇಲೆ ಅದಿಪತ್ಯ ಸ್ಥಾಪಿಸಿದ್ದರು. ತೌಳವ ದೈವಾರಾಧನೆಯ ಜೊತೆಗೆ ಶಿವ ಶಕ್ತಿಯರ ಆಲಯಗಳು ಇಲ್ಲಿ ತಲೆ ಎತ್ತಿದವು. ವೈಷ್ಣವ ಪಂಥವೂ ಇಲ್ಲಿ ಜನಮನ್ನಣೆಗಳಿಸಿತು. ಕಾರ್ಕಳವನ್ನು ಆಳಿದ ಜೈನ ದೊರೆಗಳಾದ ಭೈರವರಸರ ಕಾಲದಲ್ಲಿ ಜೈನ ಮತವು ಪ್ರಸಾರವಾಯಿತು. ಅಳುಪರಸರ ಕಾಲದಲ್ಲಿ ಉತ್ತರದಿಂದ ಹೊರಟು ಬಂದ ನವನಾಥ ಪರಂಪರೆಯ ಹಠಯೋಗಿಗಳನ್ನು ತುಳುವ ನೆಲ ತೆರೆದ ಬಾಹುಗಳಿಂದ ಸ್ವಾಗತಿಸಿತು. ಕಠೋರ ಅನುಷ್ಠಾನ. ಅಲೌಕಿಕ ಸಿದ್ದಿಗಳು, ಬೆರಗು ಹುಟ್ಟಿಸುವ ಮಾಯಾತಂತ್ರಗಳು ವಿಲಕ್ಷಣ ವ್ಯಕ್ತಿತ್ವದಿಂದ ಕೂಡಿದ್ದ ಈ ಜೋಗಿಗಳು ತುಳುನಾಡಿನ ಬೆಟ್ಟಗುಡ್ಡ ಗುಹೆಗಳಲ್ಲಿ ಸಾಧನೆಗೆ ಕುಳಿತರು.
ಈಶ್ವರಪ್ರಾಪ್ತಿ ಸಮಸ್ತ ಮನುಕುಲಕ್ಕೆ ಪ್ರಾಪ್ತವಾಗಬೇಕು. ಅದಕ್ಕೆ ಹಠಯೋಗವೇ ಮಾರ್ಗ ಎಂದ ಗುರು ಮಚ್ಚೇಂದ್ರನಾಥರು ಇಲ್ಲಿ ಅನೇಕ ತಪೋಕ್ಷೇತ್ರಗಳನ್ನು ನಿರ್ಮಾಣ ಮಾಡಿ ತೌಳವ ಪರಂಪರೆಯನ್ನು ಗಾಢವಾಗಿ ಪ್ರಭಾವಿಸಿದರು. ನಾಥ ಪರಂಪರೆಗೆ ಸೇರಿದ ಕದ್ರಿ, ಧರ್ಮಸ್ಥಳ, ಕುಂಬಳೆಯ ಪೊಸೋಡಿ ಗುಂಪೆ, ವಿಟ್ಲ, ಕೊಡಚಾದ್ರಿ, ಕಮಲಶಿಲೆ, ಮಂಗಳಾದೇವಿ ಸೂಡ. ಹಲವರಿ ಮಠ ಎಡಮೊಗೆ ಮೊದಲಾದ ಕ್ಷೇತ್ರಗಳು ನಮ್ಮ ತುಳುನಾಡಿನಲ್ಲಿವೆ. ಕಾರ್ಕಳ ತಾಲೂಕಿನಲ್ಲಿ 8 ಮತ್ತು 9ನೇ ಶತಮಾನದಲ್ಲಿ ನಾಥ ಪರಂಪರೆಯ ಪ್ರಭಾವ ಕಾಣಿಸಿತು. ಆಗ ಇಲ್ಲಿನ ನಗರದ ಪ್ರಮುಖ ಗಿರಿಯಾಗಿರುವ ಪರ್ಪಲೆಗಿರಿಯ ಗವಿಯಲ್ಲಿ ಯೋಗಿಗಳು ವಾಸವಾಗಿದ್ದ ಬಗ್ಗೆ ಐತಿಹ್ಯಗಳಿವೆ. ಇವರು ಇಲ್ಲಿ ಶಿವ ಮತ್ತು ಶಕ್ತಿಯ ಒಂದು ದೇವಾಲಯವನ್ನು ಸ್ಥಾಪಿಸಿದ್ದಾರಂತೆ. ಆದರೆ ಕಾಲ ಕ್ರಮೇಣ ರಾಜಾಶ್ರಯ ಕೈತಪ್ಪಿ ಈ ಕ್ಷೇತ್ರ ನಾಶವಾಯಿತು. ಆದರೆ ಅವರು ತಮ್ಮ ಅನುಷ್ಠಾನದಿಂದ ನೆಲೆಗೊಳಿಸಿದ್ದ ವಿಶೇಷ ದೈವೀಚೈತನ್ಯ ಮಾತ್ರ ಇಂದಿಗೂ ಇಲ್ಲಿ ಜಾಗೃತಸ್ಥಿತಿಯಲ್ಲಿದೆ.

OUR CORE VISION

Our vision is to honor and preserve the rich traditions of Tulu Nadu while fostering a deep connection between
our guardian deities, Kalkuda and Kallurti, and the community.

Cultural Preservation

To honor and preserve the rich traditions of Tulu Nadu, fostering a deep understanding of our heritage.

Community Connection

To serve as a gathering place where devotees unite in worship, creating strong community bonds through shared spiritual practices.

Divine Guidance

To connect our community with the guardian deities, Kalkuda and Kallurti, offering a space for spiritual growth and divine blessings.

News & Events

Stay updated with the latest happenings at Kalkuda Parpalegiri Temple! We host a variety of spiritual events, festivals, and community gatherings throughout the year.

ಬವರ್ ಸಿಂಗ್ ಜೊತೆಗೆ ಹಣಕಾಸು ಸಮಿತಿ ಸದಸ್ಯ ಶ್ರೀ ಅರುಣ್ಸೆನ್ ಭೇಟಿ

ರಾಜಸ್ಥಾನ ಶಿವಭಕ್ತ ಶ್ರೀ ಬವರ್ ಸಿಂಗ್ ಜೊತೆಗೆ ಹಣಕಾಸು ಸಮಿತಿ ಸದಸ್ಯ ಶ್ರೀ ಅರುಣ್ಸೆನ್ ನವೆಂಬರ್ 23 ರಂದು ಪರ್ಪಲೆಗಿರಿಗೆ ಭೇಟಿ  ನೀಡಿ ಕಾಮಗಾರಿ ಪರಿಶೀಲಿಸಿದರು.

ಪರ್ಪಲೆಗಿರಿಗೆ ಹೈದರಾಬಾದ್‌ ಶಾಸಕ ರಾಜಾಸಿಂಗ್‌ ಭೇಟಿ

ಅತ್ತೂರು ಪರ್ಪಲೆಗಿರಿಯ ಕಲ್ಕುಡ ದೈವಸ್ಥಾನಕ್ಕೆ ಹೈದರಾಬಾದ್‌ ಭಾಗ್ಯನಗರ ಶಾಸಕ ರಾಜಾಸಿಂಗ್‌ ಠಾಕೂರ್‌ ಎ. 8ರಂದು ಭೇಟಿ ನೀಡಿದರು… 

ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ದೀಪಾವಳಿ ಆಚರಣೆ

ಶ್ರೀ ಕ್ಷೇತ್ರದ ಭಕ್ತರು ಹಾಗೂ ಶ್ರೀ ಕ್ಷೇತ್ರದ ಪುನರುತ್ಥಾನ ಪುಣ್ಯ ಕಾರ್ಯದಲ್ಲಿ ವಿಶಿಷ್ಟವಾಗಿ ತೊಡಗಿಸಿಕೊಂಡಿರುವ ಹಿಂದು ಜಾಗರಣ ವೇದಿಕೆಯ… 

ಕಲ್ಕೂಡ ಕೋಡಿಯಡಿಗೆ 15 ಲಕ್ಷ ದಾನ - ಚೇತನ್ ಹೆಗ್ಡೆ ಕುಟುಂಬದಿಂದ ಪರಿಶೀಲನೆ

ಸುಮಾರು 15 ಲಕ್ಷ ಮೇಲ್ಪಟ್ಟು ಕಲ್ಕೂಡ ದೈವದ *ಕೋಡಿಯಡಿ *ಸೇವಾರ್ಥಿಗಳು ಚೇತನ್ ಹೆಗ್ಡೆ ಮತ್ತು ಮನೆಯವರು…