Parpalegiri

News & Events

ಬವರ್ ಸಿಂಗ್ ಜೊತೆಗೆ ಹಣಕಾಸು ಸಮಿತಿ ಸದಸ್ಯ ಶ್ರೀ ಅರುಣ್ಸೆನ್ ಭೇಟಿ

ರಾಜಸ್ಥಾನ ಶಿವಭಕ್ತ ಶ್ರೀ ಬವರ್ ಸಿಂಗ್ ಜೊತೆಗೆ ಹಣಕಾಸು ಸಮಿತಿ ಸದಸ್ಯ ಶ್ರೀ ಅರುಣ್ಸೆನ್ ನವೆಂಬರ್ 23 ರಂದು ಪರ್ಪಲೆಗಿರಿಗೆ ಭೇಟಿ  ನೀಡಿ ಕಾಮಗಾರಿ ಪರಿಶೀಲಿಸಿದರು.

ಪರ್ಪಲೆಗಿರಿಗೆ ಹೈದರಾಬಾದ್‌ ಶಾಸಕ ರಾಜಾಸಿಂಗ್‌ ಭೇಟಿ

ಅತ್ತೂರು ಪರ್ಪಲೆಗಿರಿಯ ಕಲ್ಕುಡ ದೈವಸ್ಥಾನಕ್ಕೆ ಹೈದರಾಬಾದ್‌ ಭಾಗ್ಯನಗರ ಶಾಸಕ ರಾಜಾಸಿಂಗ್‌ ಠಾಕೂರ್‌ ಎ. 8ರಂದು ಭೇಟಿ ನೀಡಿದರು. ಪ್ರಮೋದ್‌ ಮುತಾಲಿಕ್‌ ಜೀ ಅಭಿಮಾನಿ ಬಳಗದವರಿಂದ ಸಂಜೆ ಹೆಬ್ರಿಯಲ್ಲಿ ನಡೆಯಲಿರುವ ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಹಿನ್ನೆಲೆ ಕಾರ್ಕಳಕ್ಕೆ ಆಗಮಿಸಿರುವ ಅವರು ಮಧ್ಯಾಹ್ನ ಪರ್ಪಲೆಗಿರಿಗೆ ಭೇಟಿ ನೀಡಿದ್ದು, ಕ್ಷೇತ್ರದ ಟ್ರಸ್ಟ್‌ ಪದಾಧಿಕಾರಿಗಳು ಸ್ವಾಗತಿಸಿದರು.

ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ದೀಪಾವಳಿ ಆಚರಣೆ

ಶ್ರೀ ಕ್ಷೇತ್ರದ ಭಕ್ತರು ಹಾಗೂ ಶ್ರೀ ಕ್ಷೇತ್ರದ ಪುನರುತ್ಥಾನ ಪುಣ್ಯ ಕಾರ್ಯದಲ್ಲಿ ವಿಶಿಷ್ಟವಾಗಿ ತೊಡಗಿಸಿಕೊಂಡಿರುವ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಕಳೆದ ನಾಲ್ಕು ವರುಷಗಳಿಂದ ಪರ್ಪಲೆಗಿರಿಯಲ್ಲಿ ಸರಳವಾಗಿ ದೀಪಾವಳಿ ಆಚರಿಸುತ್ತಿದ್ದಾರೆ.

ಈ ವರುಷದ ದೀಪಾವಳಿ ಆಚರಣೆಯ ಸಮಯ ಅತ್ತೂರು ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ರಿ ಇದರ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಹೆಗ್ಡೆ ಮತ್ತು ಕಾರ್ಯದರ್ಶಿಗಳಾದ ಶ್ರೀ ಸತ್ಯೇಂದ್ರ ಭಟ್ ಇವರು ಉಪಸ್ಥಿತರಿದ್ದರು.

ಕಲ್ಕೂಡ ಕೋಡಿಯಡಿಗೆ 15 ಲಕ್ಷ ದಾನ - ಚೇತನ್ ಹೆಗ್ಡೆ ಕುಟುಂಬದಿಂದ ಪರಿಶೀಲನೆ

ಸುಮಾರು 15 ಲಕ್ಷ ಮೇಲ್ಪಟ್ಟು ಕಲ್ಕೂಡ ದೈವದ *ಕೋಡಿಯಡಿ *ಸೇವಾರ್ಥಿಗಳು ಚೇತನ್ ಹೆಗ್ಡೆ ಮತ್ತು ಮನೆಯವರು ” ಶಶಿ ನಿವಾಸ ” ಕಾಬೆಟ್ಟು ಕಾರ್ಕಳ : ಕಲ್ಕೂಡ ಗುಡಿಯ ಕಾಮಗಾರಿ ಪರಿಶೀಲಿಸಿದರು

ಕಲ್ಕೂಡ ಗುಡಿಯ ಕಾಮಗಾರಿ ಪರಿಶೀಲನೆ: ಶಿಲ್ಪಿ ಮುರಳಿ, ಜಗದೀಶ್ ಮತ್ತು ರವಿರಾಜ್ ನಾಯ್ಕ್

ಕಲ್ಕೂಡ ಗುಡಿಯ ಆದಿಸ್ಥಾನ ಸೇವಾರ್ಥಿ ಶಿಲ್ಪಿ ಮುರಳಿ ಅತ್ತೂರ್ & ಮುಖ್ಯ ಶಿಲ್ಪಿ ಜಗದೀಶ್&ಕಾಂಕ್ಟರ್ ರವಿರಾಜ್ ನಾಯ್ಕ್ ಪದವು &ಕಲ್ಕೂಡ ಮುಕಾಲ್ದಿ ಕಾಮಗಾರಿ ಪರಿಶೀಲನೆ

ಕಲ್ಕೂಡ ದೈವದ ಕಾಮಗಾರಿ ತ್ವರಿತ ಪೂರ್ಣತೆಗೆ ಟ್ರಸ್ಟ್ ಮತ್ತು ಪುನರುತ್ಥಾನ ಸಮಿತಿ ಸಭೆ ಯಶಸ್ವಿ

ಟ್ರಸ್ಟ್ & ಪುನರುತಾನ ಸಮಿತಿ ಸಭೆಯಲ್ಲಿ ಅತಿಶಿಗ್ರವಾಗಿ ಕಲ್ಕೂಡ ದೈವದ ಕಾಮಗಾರಿ ಪೂರ್ಣಗೋಳಿಸಲು ಬೇಕಾದ ಎಲ್ಲಾ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಸಭೆ ಯಶಸ್ವೀಯಾಗಿ ಜರಗಿತು.